ಆಧುನಿಕ ಸಂಪೂರ್ಣ ಎಲೆಕ್ಟ್ರಿಕಲ್ ಕಾರ್ ಗಳು

ಆಧುನಿಕ ಎಲೆಕ್ಟ್ರಿಕ್ ಕಾರುಗಳ ಬಗ್ಗೆ ಮಾಹಿತಿ ಎಲೆಕ್ಟ್ರಿಕ್ ಕಾರ್ ಅಥವಾ ಎಲೆಕ್ಟ್ರಿಕ್ ವೆಹಿಕಲ್(ಇವಿ)ಒಂದು ಪ್ರಯಾಣಿಕ ಆಟೋಮೊಬೈಲ್ ಅಗಿದು, ಇದು ಎಲೆಕ್ಟ್ರಿಕ್ ಟ್ರಾಕ್ಷನ್ ಮೋಟಾರ್ ನಿಂದ ಚಲಿಸುತ್ತದೆ,ಆನ್- ಬೋರ್ಡ್ ಬ್ಯಾಟರಿಗಳಲ್ಲಿ ಸಂಗ್ರಹವಾಗಿರುವ ಶಕ್ತಿಯನ್ನು ಮಾತ್ರ ಬಳಸುತ್ತದೆ . ಸಾಂಪ್ರದಾಯಿಕ ಅಂತರಿಕ ದಹನಕಾರಿ ಎoಜಿನ್( ICE ) ವಾಹನಗಳಿಗೆ ಹೋಲಿಸಿದರೆ , ಎಲೆಕ್ಟ್ರಿಕ್ ಕಾರುಗಳು ನಿಶ್ಯಬ್ದವಾಗಿರುತ್ತವೆ , ಹೆಚ್ಚು ಸ್ಪoದಿಸುತ್ತವೆ , ಉನ್ನತ ಶಕ್ತಿ ಪರಿವರ್ತನೆ ದಕ್ಷತೆಯನ್ನು ಹೊಂದಿವೆ ಮತ್ತು ಯಾವುದೇ ನಿಷ್ಕಾಸ ಹೊರಸೂಸುವಿಕೆ ಮತ್ತು ಕಡಿಮೆ ಒಟ್ಟಾರೆ ವಾಹನ ಹೊರಸೂಸುವಿಕೆಗಳು[೧] ( ಅದಾಗ್ಯೂ ವಿದ್ಯುತ್ ಸರಬರಾಜು ಮಾಡುವ ವಿದ್ಯುತ್ ಸ್ಥಾವರವು ತನ್ನದೇ ಆದ ಹೊರಸೂಸುವಿಕೆಯನ್ನು ಉತ್ಪಾದಿಸಬಹುದು ). “ಎಲೆಕ್ಟ್ರಿಕ್ ಕಾರ” ಎoಬ ಪದವು ಸಾಮಾನ್ಯವಾಗಿ ಬ್ಯಾಟರಿ ಎಲೆಕ್ಟ್ರಿಕ್ ವೆಹಿಕಲ್ (BEV) ಅನ್ನು ಉಲ್ಲೇಖಿಸುತ್ತದೆ , ಆದರೆ ವಿಶಾಲವಾಗಿ ಪ್ಲಗ್ - ಇನ್ ಹೈಬ್ರಿಡ್ ಎಲೆಕ್ಟ್ರಿಕ್ ವೆಹಿಕಲ್ ( PHEV ) , ರೇಂಜ್-ವಿಸ್ತರಿತ ಎಲೆಕ್ಟ್ರಿಕ್ ವೆಹಿಕಲ್ ( REEV ) ಮತ್ತು ಪ್ಯೂಲ್ ಸೆಲ್ ಎಲೆಕ್ಟ್ರಿಕ್ ವೆಹಿಕಲ್ ( FCEV ) ಅನ್ನು ಸಹ ಒಳಗೊಂಡಿದೆ. ಆಧುನಿಕ ಸಂಪೂರ್ಣ ಎಲೆಕ್ಟ್ರಿಕ್ ಕಾರ್ ಗಳು